Wednesday, 15 November 2023

ಪ್ರೀತಿ - ಕೇತಕೀವನ - ಡಿವಿಜಿ

ಮುಗಿಲು ಮುಗಿಲನರಸಿ ಸಾರ- 
ಲೊಗೆವುದೊಂದು ಮಿಂಚಿನೋಜೆ 
ಅದನು ಮೀರ್ದ ಮಿಂಚನಿಳೆಯೊ-
ಳರಿತರಿಲ್ಲವೇಂ? 
ಎದೆಯ ಕೊರೆವ 
ಮಿನುಗುಲತೆಯ ಮರೆಯಲಪ್ಪುದೇಂ? 

ನಯನಯುಗಳ ಯುಗದೊಳೊಂದ 
ಬಯಸುತೊಂದು ಸಾರಿದಂದು 
ಹೊಳೆವ ಜೀವಮಿಂಚು ಜನವ 
ಕೆಣಕುತಿರುವುದು; 
ಸುಳಿವ ನಗೆಯ ಹೊಳಪು 
ಜಗವ ಕುಣಿಸುತಿರುವುದು.

1 comment:

  1. ಮೋಡವು ಮೋಡದ ಬಳಿಸುಳಿದು ಸ್ಪರ್ಶಿಸಿದಾಗ ಸೆಳೆಮಿಂಚಿನ ಸರಣಿಯೇ ಮೂಡುತ್ತವೆ.
    ಮಹಾನ್ ಶಕ್ತಿಸಂಘಾತದ ಸರಣಿಯೇ ಮೋಡಮೋಡಗಳ ಸಂಘಟ್ಟಣೆಯಿಂದ ಮೂಡುತ್ತದೆ.
    ಆಗಸದಲ್ಲಿ ಕಾಣುವ ಈ ಮೋಡಗಳ ಸ್ಪರ್ಶವನ್ನು ಮೀರಿಸುವ ಮಿಂಚಿನ ಅನುಭವವನ್ನು ಅನುಭವಿಸಿದವರು ಮಿಂಚಿಗೆ ಸಾಕ್ಷಿಯೆಂಬಂತಿದ್ದಾರೆ!

    ಕಾತರದಿಂದ ಹೊರಹೊಮ್ಮಲು ಹವಣಿಸುತ್ತಿರುವ ಮನದೊಳಗಿನ ಪ್ರೇಮಲತೆಯು ತನ್ನ ಕುಡಿಯಸ್ಪರ್ಶಕ್ಕಾಗಿ ಗೋಣೆತ್ತಿ ಕಾದಿರುವ ಮಿನುಗುಲತೆಯ ಧ್ಯಾನದಲ್ಲೇ ಲೀನವಾಗಿದೆ.!

    ಪ್ರೇಮಿಗಳ ಸೆಳೆಮಿಂಚಕಣ್ಣೋಟಗಳು ಸಂಧಿಸಲು ಬಳಿಸಾರುತ್ತವೆ. ಕಡೆಗಣ್ಣನೋಟಗಳ ಆಸ್ಫಾಳನದ ಸಾಕ್ಷಿರುಜುವಾಗಿ ಜೀವಮಿಂಚಿನ ಭಾಷ್ಯವನ್ನು ಬರೆಯಲು ಒಲವಿನ ಒಸಗೆಯು ಕಣ್ಣಂಚಿನಮಿಂಚಿನನೋಟವನ್ನು ಕೆಣಕುತ್ತ ನೋಟದಸಂಗಮಕ್ಕಾಗಿ ಹಾತೊರೆಯುತ್ತದೆ.

    ಭಾವಾನುವಾದ - ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ

    ReplyDelete