ಕಾವ್ಯತಪಸ್ಸಂಪಾದಿತ ।
ದಿವ್ಯಯಶಃಕಾಯ ಶಾಶ್ವತಂ ಶ್ರೀಕಂಠಂ ॥
ಸೇವ್ಯಂ ಕನ್ನಡಮೆಂಬೊಂ- ।
ದವ್ಯಾಹತ ಭವ್ಯ ದೀಕ್ಷೆಯೊಳ್ ಗುರುವಾದಂ ॥
************************************
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಅವರು 'ಕನ್ನಡದ ಕಣ್ವ' ಎಂದು ಹೆಸರಾದವರು. ಕನ್ನಡವನ್ನೇ ಉಸಿರಾಡಿದವರು. ಆಂಗ್ಲಭಾಷೆಯ ಸಾಹಿತ್ಯವನ್ನೂ ಕನ್ನಡಕ್ಕೆ ಅನುವಾದಿಸಿ ಕನ್ನಡವನ್ನೇ ಉಸಿರಾಡಿದರು.
ಕಾವ್ಯವನ್ನೇ ತಪಸ್ಸನ್ನಾಗಿ ಸ್ವೀಕರಿಸಿದರು. ಕಾವ್ಯ ತಪಸ್ಸಿದ್ಧಿಯಿಂದ ಯಶಸ್ಸನ್ನು ಸಾಧಿಸಿದರು. ಯಶಃಶ್ರೀಯಿಂದ ಕನ್ನಡಾಂಬೆಯ ವಿಜಯಧ್ವಜವನ್ನು ಹಿಡಿದೆತ್ತಿದರು. ಕನ್ನಡಸಾಹಿತ್ಯಸಿರಿಯನ್ನು ಹೆಚ್ಚಿಸಿದ ಬೆಳ್ಳೂರಿನ ಶ್ರೀ ಕಂಠಯ್ಯನವರು ಶಾಶ್ವತ ಶ್ರೀಕಂಠರಾದರು.
ಕನ್ನಡ ಸಾಹಿತ್ಯ ಸೇವೆಯನ್ನು ಜೀವಿತದೀಕ್ಷೆ ಯನ್ನಾಗಿ ಸ್ವೀಕರಿಸಿದವರು. ಕನ್ನಡಸೇವೆಯ ನಿರಂತರ ದೀಕ್ಷೆಯಿಂದ ಗುರುವಾದರು.
ಭಾವಗ್ರಹಣ : ಕೊಕ್ಕಡ ವೆಂಕಟ್ರಮಣ ಭಟ್ ಮಂಡ್ಯ
No comments:
Post a Comment