Devanahalli Venkataramanaiah Gundappa, popularly known as DVG, was a Kannada writer and philosopher. He is best known for Manku Thimmana Kagga
Sunday, 15 October 2023
ಕೃತ್ರಿಮಿ - ಕೇತಕೀವನ - ಡಿವಿಜಿ
ಎನ್ನೆದೆಯನಿರಿಯುತಿಹ ಬಾಣಗಳ ನಿನ್ನ ಕಣ್ಣುಗಳೊಡಗಿಸಿಹ ಕೃತ್ರಿಮಿಯದಾರು? ಎನ್ನಸುವನೆಳೆಯುತಿಹ ಪಾಶಗಳ ನಿನ್ನ ಕೆನ್ನೆಗೆಳೊಳೊಟ್ಟಿರುವ ಮರ್ಮಿಗನದಾರು? ಎನ್ನ ಮೈಮರೆಯಿಸುವ ಸಂಮೋಹನಾಸ್ತಗಳ ನಿನ್ನ ನಾಸಾಪುಟದೊಳಾವನಿರಿಸಿಹನು? ಇನಿತನೆಸಗಿದ ಮಾಟಗಾರನೇತಕೆ ನಿನ್ನ ಮನಸನೆನ್ನಯ ಮನಸಿಗನುಗೊಳಿಸದಿಹನು?
No comments:
Post a Comment